Wednesday, 22 June 2022

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

ಸತತ ಪ್ರಯತ್ನ ಮತ್ತು ಉತ್ತಮ ಗುಣಮಟ್ಟದ ತರಬೇತಿಯಿಂದ ಸಾಧನೆ ಸಾಧ್ಯ: ಬಿ.ಪಿ.ವರದರಾಯ್ ಪೈ
ಕುಂದಾಪುರ: ಸತತ ಪ್ರಯತ್ನ ಮತ್ತು ಉತ್ತಮ ಗುಣಮಟ್ಟದ ತರಬೇತಿಯಿಂದ ನಿಮ್ಮ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಕಾರ್ಯದರ್ಶಿಗಳಾದ ಬಿ.ಪಿ.ವರದರಾಯ್ ಪೈ ಅವರು ಹೇಳಿದರು.
ಅವರು ದಿನಾಂಕ 22ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಲ್ಲಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಮತ್ತು ಉತ್ತರಪ್ರದೇಶದ ನೋಯ್ಡಾ ಇಲ್ಲಿನ ಎಕ್ಸ್ಟ್ರಾ ಮಾರ್ಕ್ಸ್ ಸಂಸ್ಥೆಯ ಸಹಯೋಗದಲ್ಲಿ ಸಿ.ಇ.ಟಿ, ಐಐಟಿ-ಜೆಇಇ, ನೀಟ್ ಮತ್ತು ಎಂ.ಇ.ಟಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಸಮಯ ಪ್ರಜ್ಞೆ, ಏಕಾಗ್ರತೆ, ಸತತ ಓದು ಗುಣಮಟ್ಟದ ತರಬೇತಿ ತುಂಬಾ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಕ್ಸ್ಟ್ರಾ ಮಾರ್ಕ್ಸ್  ಸಂಸ್ಥೆಯು ಉತ್ತಮ ತರಬೇತಿಯ ಉಪಯೋಗವನ್ನು ಪಡೆದುಕೊಂಡು ಒಳ್ಳೆಯ ಶಿಕ್ಷಣ ಪಡೆಯಬೇಕು. ಅಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ಹಾಕುವ ಬಂಡವಾಳದಿಂದ ಕುಟುಂಬ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತದೆ.   ಎಂದು ಹೇಳಿದರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಅಡಿಯಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನಲ್ಲಿ ಅಧ್ಯಯನ ಮಾಡಲು ವಿಶೇಷ  ಅವಕಾಶ ಕಲ್ಪಿಸಲಾಗಿದೆ.  ಅದರ ಆಯ್ಕೆ ಪ್ರಕ್ರಿಯೆಗೆ ಅನುಸಾರವಾಗಿ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಕ್ಸ್ಟ್ರಾ ಮಾರ್ಕ್ಸ್  ಸಂಸ್ಥೆಯ ಕರ್ನಾಟಕದ ಬಿಸಿನೆಸ್ ಮುಖ್ಯಸ್ಥರಾದ ವಿನೋದ್ ರಮೇಶ್, ಡೆಪ್ಯೂಟಿ ವ್ಯವಸ್ಥಾಪಕರಾದ ದಿಶಾ ಶೆಟ್ಟಿ,  ಉಪನ್ಯಾಸಕ ಜೀವಶಾಸ್ತ್ರ  ಡಾ. ನಿರಂಜನ, ನಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪ್ರಕಾಶ್ ಸೋನ್ಸ್, ರಾಜೇಂದ್ರ ತೋಳಾರ್, ಸದಾನಂದ ಛಾತ್ರ , ಜಯಕಾರ ಶೆಟ್ಟಿ , ಆಡಳಿತ ಮಂಡಳಿಯ ಸದಸ್ಯರಾದ ಪ್ರಜ್ಞೇಶ್ ಪ್ರಭು, ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೀವಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಸರೋಜಾ ಎಂ. ವಂದಿಸಿದರು. ಆಂಗ್ಲ ಭಾಷಾ ಉಪನ್ಯಾಸಕ ಡೊಮಿನಿಕ್ ವಿನಸ್ಟನ್ ಬ್ರಗಾಂಝಾ ಕಾರ್ಯಕ್ರಮ ನಿರೂಪಿಸಿದರು.

Tuesday, 21 June 2022

ಭಂಡಾರ್ಕಾರ್ಸ್: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪರಿಚಯ

 ವಿದ್ಯಾರ್ಥಿಗಳು ಉನ್ನತ ಸಾಧನೆಯ ಕನಸು ಕಟ್ಟಿಕೊಳ್ಳಿ: ಶಾಂತಾರಾಮ್ ಪ್ರಭು 
ಕುಂದಾಪುರ:ದಿನಾಂಕ 9ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಚಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಶಾಂತಾರಾಮ್ ಪ್ರಭು ಮಾತನಾಡಿ ವಿದ್ಯಾರ್ಥಿಗಳು ಕನಸು ಕಟ್ಟಿಕೊಂಡು ಕಾಲೇಜಿಗೆ ಪ್ರವೇಶ ತೆಗೆದುಕೊಂಡಿದ್ದಾ
ರೆ. ಉನ್ನತ ಗುರಿಯನ್ನು ಕಟ್ಟಿಕೊಂಡಿದ್ದಾರೆ. ವಿದ್ಯಾರ್ಥಿಗಳು ಇಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡುವತ್ತ ಹೆಜ್ಜೆ ಹಾಕಬೇಕು. ಮುಂದಿನ ದಿನಗಳಲ್ಲಿ ಪಿ.ಯು.ಸಿ ನಂತರ ಹೆಚ್ಚಿನ ಶಿಕ್ಷಣ ಪಡೆಯಲು ಅವಕಾಶವಿದೆ. 
ಸವಾಲುಗಳನ್ನು ಎದುರಿಸಲು ತಯಾರಾಗಿ. ಜೀವನದಲ್ಲಿ ಯಶಸ್ಸನ್ನು ಪಡೆಯುವುದರೊಂದಿಗೆ ಗುರು ಹಿರಿಯರನ್ನು ಕಲಿತ ಶಿಕ್ಷಣ ಸಂಸ್ಥೆಯ ಬಗ್ಗೆ ಗೌರವದಿಂದಿರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಛಾತ್ರ ಮತ್ತು ರಾಜೇಂದ್ರ ತೋಳಾರ್ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನ ಕುರಿತು ಮಾಹಿತಿ ನೀಡಿದರು. 
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯರಾದ ಡಾ. ಸರೋಜಾ ಎಂ. ಸ್ವಾಗತಿಸಿ, ಗೀತಾ ಪ್ರಭು ವಂದಿಸಿ, ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

     

ಭಂಡಾರ್ಕಾರ್ಸ್ ವಿದ್ಯಾರ್ಥಿಗಳಿಂದ ಯುವವಾಣಿ ಕಾರ್ಯಕ್ರಮ

ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರು ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಪರಿಸರ ದಿನಾಚರಣೆ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡಿದರು. 

ಭಂಡಾರ್ಕಾರ್ಸ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ: ದಿನಾಂಕ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ  ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಕುಂದಾಪುರದ ಪತಂಜಲಿ ಯೋಗ ಸಮಿತಿ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ  "ವಿಶ್ವ ಯೋಗ ದಿನಾಚರಣೆ" ಪ್ರಯುಕ್ತ ವಿಶೇಷ ಯೋಗ  ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ತಾಲೂಕು ಉಪವಿಭಾಗಾಧಿಕಾರಿ ಕೆ.ರಾಜು ಮಾತನಾಡಿ ಈ ಎಂಟನೆ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿ ಭಾರತ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆ ಈ ಯೋಗಕಲೆ. ಇದನ್ನು ಜೀವನದ ಕಲೆಯಾಗಿಸಿಕೊಳ್ಳಬೇಕು. ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳೋಣ ಎಂದು ಕರೆ ನೀಡಿದರು. 
 ಕುಂದಾಪುರದ ಪತಂಜಲಿ ಯೋಗ ಸಮಿತಿಯ ವಿವೇಕ ಪೈ ಮಾತನಾಡಿ ನಮ್ಮನ್ನು ನಾವು ಅರಿಯಬೇಕು. ಜೀವನದಲ್ಲಿ ಅಷ್ಟಾಂಗ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿ ಮನಸ್ಸಿನ ಏಕಾಗ್ರತೆ ಮತ್ತು ಕುರಿತು ಸರಳ ಯೋಗವಿಧಾನ ಮತ್ತು ಯೋಗಾಭ್ಯಾಸವನ್ನುವನ್ನು ಕಾರ್ಯಾಗಾರದ ಮೂಲಕ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ನೆಹರು ಯುವ ಕೇಂದ್ರ ಉಡುಪಿಯ ಅಧಿಕಾರಿಗಳಾದ ವಿಲ್ಫ್ರೆಡ್ ಡಿಸೋಜ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವಿಧ್ಯಾರ್ಥಿ ಸಂದೇಶ್ ಅವರಿಂದ ವಿಶೇಷ ಯೋಗ ಪ್ರದರ್ಶನ ನಡೆಯಿತು.
ಬೆಳಿಗ್ಗೆ 6.30ರಿಂದ 11.15ವರೆಗೆ ಯೋಗ ಕಾರ್ಯಕ್ರಮ ನಡೆಯಿತು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು.
ಪ್ರೊ.ಸತ್ಯನಾರಾಯಣ ಸ್ವಾಗತಿಸಿದರು.
(ಪ್ರಕಟಣೆ ಕೃಪೆಗಾಗಿ)

women's forum program

ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದ ವರದಿ



          ಸೈಬರ್ ಕ್ರೈಮ್ ದಿನೇ ದಿನೇ ಹೆಚ್ಚುತ್ತಲೇ ಇದೆ.ಸೈಬರ್ ಕ್ರೈಂ ಎನ್ನುವಂತದ್ದು ಸಾಮಾನ್ಯ ಜನರ ಮೇಲೆ ಹೆಚ್ಚಾಗಿ ನಡೆಯುವಂಥದ್ದು ಎಂದು ವಕೀಲರಾದ ರಾಘವೇಂದ್ರ ಚರಣ ನಾವಡಾ  ಹೇಳಿದರು.
               ಜೂನ್4ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಸಹಯೋಗದಲ್ಲಿ ನಡೆಸಲಾದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
               ಅವರು ಮೊಬೈಲ್ ನಮಗೆ ಎಷ್ಟು ಉಪಯೋಗಕಾರಿಯೋ ಅಷ್ಟೇ ಉಪದ್ರಕಾರಿಯೂ ಹೌದು. ಸೈಬರ್ ಅಪರಾಧ ಮಾಡಿದವರು ಅವರ ಎಲ್ಲಾ ಕುರುಹುಗಳನ್ನು ಅಳಿಸಿ ಬಿಡುತ್ತಾರೆ ಈ ಕಾರಣದಿಂದಾಗಿ ಸೈಬರ್ ಕ್ರೈಮ್ ಸಂಖ್ಯೆಯಲ್ಲಿ ದಿನೇದಿನೇ ಏರಿಕೆಯಾಗುತ್ತಿದೆ.
 ಇದರಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳನ್ನು ಕಾಣಬಹುದು. ವ್ಯಕ್ತಿಯ ವಿರುದ್ಧ ಅಪರಾಧ, ಗುರುತಿನ ಪರೀಕ್ಷೆ, ಹ್ಯಾಕಿಂಗ್ ಮತ್ತು ಸೈಬರ್ ಸ್ಟಾಕಿಂಗ್.
             ಮೊಬೈಲ್ ಬಳಕೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಲ್ಲಾ ಕೆಲಸಗಳಿಗೂ ನಾವು ಫೋನುಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ನಾವು ಹೊಸ ಹೊಸ ಅಪ್ಗಳನ್ನು   ಡೌನ್ಲೋಡ್ ಮಾಡುವಾಗ ಅಥವಾ ಎಸ್.ಎಂ.ಎಸ್ ಗಳನ್ನು ಕಳುಹಿಸುವಾಗ ಅತ್ಯಂತ ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಏಕೆಂದರೆ ಯಾವ ರೀತಿ ಇಂದಾದರೂ ನಮ್ಮ  ವೈಯಕ್ತಿಕ ಮಾಹಿತಿಗಳು ಉಪಯೋಗ ಗೊಳ್ಳುವ ಸಾಧ್ಯತೆ ಇದೆ ಎಂದು ಉದಾಹರಣೆ ಸಹಿತ ವಿವರಿಸಿದರು.
                 ಎಲ್ಲಾ ದೊಡ್ಡ ದೊಡ್ಡ ಅಪರಾಧಗಳನ್ನು ಮೊಬೈಲ್ ನಿಂದಲೇ ಹಿಡಿಯಲಾಗುತ್ತದೆ.ಕ್ಲೌಡ್ ಎನ್ನುವಂತಹ ಗೂಗಲ್ ನ ಅ ಡಿಯಲ್ಲಿ ಬರುವಂತಹ ಒಂದು ಸಾಫ್ಟ್ವೇರ್ ನಿಂದ ಅಪರಾಧಿಯ ಎ ಲ್ಲಾ ಅಳಿಸಲಾದ ಎಸ್.ಎಂ.ಎಸ್, ಫೋಟೋಗಳು ಇತರ ಮಾಹಿತಿಗಳನ್ನು ಪುನಃ ನೋಡಬಹುದು.ಹಾಗಾಗಿ
ಮೊಬೈಲ್ ಮತ್ತು ಅಂತರ್ಜಾಲದ ಬಳಕೆಯ  ಸಂದರ್ಭದಲ್ಲಿ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು ಅರಿವು ಮೂಡಿಸಿದರು.
              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಎನ್.ಪಿ ನಾರಾಯಣ್ ಶೆಟ್ಟಿಯವರು ವಹಿಸಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷರು ಮತ್ತು ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಯಶವಂತಿ. ಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶುಭಂಕರ್ ಆಚಾರಿ  ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಿಂಚನ ಮತ್ತು ಸೌಜನ್ಯ ಕಾರ್ಯಕ್ರಮ ನಿರ್ವಹಿಸಿದರು.

Sunday, 26 August 2018

Kannada Title

http://kannadaviralnews.com/wp-content/uploads/2018/08/1534908109-picsay-1024x576.jpg